ಪ್ರಾಂಶುಪಾಲರ ಸಂದೇಶ

ಡಿ.ಎಚ್.ಪ್ಯಾಥಿ ಪ್ರಾಂಶುಪಾಲರು


ವಿದ್ಯಾರ್ಥಿಗಳಿಗೆ ಎ.ಆರ್.ಎಂ. ಪ್ರಥಮ ದರ್ಜೆ ಕಾಲೇಜು, ದಾವಣಗೆರೆ ನಾನು ವಿದ್ಯಾರ್ಥಿಗಳಿಗೆ ಉತ್ತಮವಾದ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಂದ ಗುಣಾತ್ಮಕ ಶಿಕ್ಷಣವನ್ನು ನೀಡುತ್ತಿದ್ದೇವೆ. ನಮ್ಮ ಕಾಲೇಜಿನ ಆಡಳಿತ ಮಂಡಳಿ ಮತ್ತು ಬೋಧಕ ಹಾಗೂ ಬೋಧಕೇತರ ವರ್ತನೆಗಳು ಅತ್ಯುತ್ತಮವಾಗಿವೆ. ಸುಸಜ್ಜಿತವಾದ ತರಗತಿಗಳನ್ನು ಹೊಂದಿದೆ. ನಮ್ಮ ಕಾಲೇಜು ಆರಂಭದಿಂದ ಉತ್ತಮ ಫಲಿತಾಂಶವನ್ನು ಗಳಿಸುತ್ತ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಿದೆ.

ವಿದ್ಯಾರ್ಥಿಗಳ ಫಲಿತಾಂಶಕ್ಕಾಗಿ ತರಗತಿಗಳ ಆರಂಭದಿಂದಲೂ ಬೋಧಕ ವರ್ಗದವರು ತಮ್ಮ ಶ್ರಮವಹಿಸಿ ಕಾರ್ಯನಿರ್ವಹಿಸುತ್ತಾರೆ ಕಾಲೇಜಿನಲ್ಲಿ ದೈಹಿಕವಾಗಿ ಭೌತಿಕವಾಗಿ ಸಮಾಜಿಕವಾಗಿ ಆಧ್ಯಾತ್ಮಿಕವಾಗಿ ಉತ್ತಮ ವಿದ್ಯಾರ್ಥಿಗಳ ಬೆಳವಣಿಗೆಗಾಗಿ ಕಾರ್ಯ ನಿರ್ವಹಿಸುಲಾಗುತ್ತಿದೆ. ನಾನು ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರಿಗೆ ಅಭಿನಂದನೆ ಸಲ್ಲಿಸುತ್ತೇನೆ, ನಮ್ಮ ಎಲ್ಲ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮತ್ತು ಬೇಕಾದಂತಹ ಎಲ್ಲಾ ಸಹಾಯವನ್ನು ನೀಡುತ್ತ ಉತ್ತಮ ಸಾಧನೆ ಮತ್ತು ಗುರಿ, ಉದ್ದೇಶಗಳನ್ನು ಈಡೇರಿಸಲು ಶ್ರಮಿಸುತ್ತಾನೆ.