ಸಂಸ್ಥೆಯ ಬಗ್ಗೆ

ಶ್ರೀ ದೇವರಾಜ್ ಅರಸ್ ವಿದ್ಯಾ ಸಂಸ್ಥೆ (ರಿ) ಚಿತ್ರದುರ್ಗ 1983-84 ರಲ್ಲಿ ಸ್ಥಾಪನೆಯಾಗಿದ್ದು, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಇನ್ನಿತರೆ ಹಿಂದುಳಿದ ಸಮಾಜಕ್ಕೆ ಅನುಕೂಲತ್ಮಕವಾಗುವ ಉದ್ದೇಶದಿಂದ ಸ್ಥಾಪಿಸಲಾದ ಸಂಸ್ಥೆಯಾಗಿದೆ. ಇದು ಪ್ರಾಥಮಿಕ, ಪ್ರೌಢ, ಪದವಿ ಪೂರ್ವ, ಪದವಿ, ನರ್ಸಿಂಗ್, ಪ್ಯಾರಾ ಮೆಡಿಕಲ್, ಬಿ.ಎ.ಎಮ್.ಎಸ್.(ಆಯುರ್ವೇದಿಕ್) ವಿವಿದ ರೀತಿಯ ಕಾಲೇಜುಗಳನ್ನು ಸ್ಥಾಪಿಸಿ ಎಲ್ಲ ವರ್ಗದ ವಿದ್ಯಾರ್ಥಿ/ನಿಯರಿಗೆ ಶಿಕ್ಷಣವನ್ನು ನೀಡುತ್ತಾ ಬಂದಿದೆ.

ಈ ಸಂಸ್ಥೆಯು ನಿರಂತರವಾಗಿ ಸಾಮಾಜಿಕ ಚಟುವಟಿಕೆಗಳಾದ ಆರೋಗ್ಯ ಅರಿವುಗಳ ಕಾರ್ಯಕ್ರಮಗಳು ಹಾಗೂ ಸ್ವಸಹಾಯ ಸಮೂಹಗಳನ್ನು ಚಿತ್ರದುರ್ಗ ಹಾಗೂ ದಾವಣಗೆರೆಯಲ್ಲಿ ಆಯೋಜಿಸುತ್ತ ಬರಲಾಗಿದೆ. ಇದರ ಜೊತೆಗೆ ಅನೇಕ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಸಹ ಸಮಾಜದಲ್ಲಿ ರೂಪಿಸಿಕೊಂಡು ಬರಲಾಗಿದೆ.

 

ಕಾಲೇಜಿನ ಬಗ್ಗೆ

(ಎ.ಆರ್.ಎಂ.) ಆನೆಕೊಂಡ ರೇವಕ್ಕಳ ಮಹಾದೇವಪ್ಪ ಪ್ರಥಮ ದರ್ಜೆ ಕಾಲೇಜು,1990-91 ರಲ್ಲಿ ಸ್ಥಾಪನೆಯಾಗಿದ್ದು ಉನ್ನತವಾದ ಮಟ್ಟದಲ್ಲಿ ಗುರುತಿಸಿಕೊಂಡ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಆಡಳಿತ ಮಂಡಳಿಯಿಂದ ನಡೆಸುತ್ತ ಬಂದಿರುವ ಹಾಗೂ ಶ್ರೀ ದೇವರಾಜ್ ಅರಸ್ ವಿದ್ಯಾಸಂಸ್ಥೆ ಅಡಿಯಲ್ಲಿ ಸಹ ಶಿಕ್ಷಣವನ್ನು ನೀಡುತ್ತ ಬಂದಿದೆ ಪ್ರಾರಂಭವಾದ ವರ್ಷದಿಂದ ಬಿ.ಎ. ಬಿ.ಕಾಂ. ಮತ್ತು ಎಂ.ಕಾಂ ಪದವಿಗಳನ್ನು ಪ್ರಾರಂಭಿಸಿ, ಒಳ್ಳೆಯ ಗುಣಮಟ್ಟ ಹಾಗೂ ಪ್ರಮಾಣದ ಬೆಳವಣಿಗೆಯನ್ನು ಕಾಣುತ್ತ ಬಂದಿದೆ. ಹಾಗೂ ಆಡಳಿತ ಮಂಡಳಿ ಎಲ್ಲಾ ಸಿಬ್ಬಂದಿ ವರ್ಗದವರು ಕಾಲೇಜಿನ ಅಬಿವೃದ್ದಿಗೊಸ್ಕರ ಸಮರ್ಪಣಾ ಭಾವದಿಂದ ವಿದ್ಯಾರ್ಥಿಗಳ ಉನ್ನತಿಗೋಸ್ಕರ ಕಾರ್ಯ ನಿರ್ವಹಿಸುತ್ತಿದ್ದಾರೆ.

ದೃಷ್ಟಿಕೋನ

ಎಲ್ಲಾ ಸಮುದಾಯದ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣಕ್ಕೆ ಪ್ರೇರೆಪಿಸುವುದು.

ಧ್ಯೇಯ

ಪ್ರಸ್ತುತ ದಿನದ ಎಲ್ಲಾ ಅವಶ್ಯಕತೆಗಳನ್ನು ಮೌಲ್ಯಧಾರಿತ ಶಿಕ್ಷಣವನ್ನು ಒದಗಿಸುವ ಮೂಲಕ ವಿದ್ಯಾರ್ಥಿಗಳನ್ನು ಜವಾಬ್ಬಾರಿಯುತ ಹಾಗೂ ಸಮಾಜಿಕ ಬದ್ದತೆಯಳ್ಳ ವ್ಯಕ್ತಿಯನ್ನಾಗಿ ರೂಪಿಸುವುದು ದೇಶ ಕಟ್ಟುವ ನಿಟ್ಟಿನಲ್ಲಿ ದೈಹಿಕ ಭೌತಿಕ ಆಧ್ಯಾತ್ಮಿಕ ಈ ಎಲ್ಲಾ ಸರ್ವತೋಮುಖ ಗುಣಗಳನ್ನು ವಿದ್ಯಾರ್ಥಿ ಹಾಗೂ ಸಿಬ್ಬಂದಿಗಳಲ್ಲಿ ಬೆಳಸುವುದು.

ಧೇಯೋದ್ಧೇಶಗಳು

ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ವಿದ್ಯಾರ್ಥಿಗಳನ್ನು ಸದೃಡರನ್ನಾಗಿ ಮಾಡುವುದು
ತಾರ್ಕಿಕ ಮತ್ತು ವಿಚಾರಾತ್ಮಕ ಆಲೋಚನಾತ್ಮಕ ವಿದ್ಯಾರ್ಥಿಗಳನ್ನು ರೂಪಿಸುವುದು
ಕಲಿಕೆಯ ಜೊತೆಗೆ ಒತ್ತಡ ರಹಿತ ಮತ್ತು ಧನಾತ್ಮಕ ಆಲೋಚನೆಗಳನ್ನು ಬೆಳಸುವುದು
ಸಮಾಜದ ಹಾಗೂ ದೇಶದ ಕಡೆ ಗಮನ ಹರಿಸಲು, ರಾಷ್ಟ್ರೀಯ ಭಾವಕ್ಯತೆ ಹಾಗೂ ರಾಷ್ಟ್ರ ಭಕ್ತಿಯನ್ನು ಹೆಚ್ಚಿಸುವುದು
ವಿದ್ಯಾರ್ಥಿಗಳನ್ನು ಕ್ರೀಡೆ, ಪಠ್ಯೇತರ ಹಾಗೂ ಸಾಂಸ್ಕøತಿಕ ಚಟುವಟಿಕೆಗಳು ವಿಚಾರ ಸಂಕಿರಣ ಕಾರ್ಯಗಾರಗಳಲ್ಲಿ ಭಾಗವಹಿಸಲು ಉತ್ತೇಜಿಸುವುದು
ದೇಶದ ಸಂಸ್ಕ್ರತಿ ಹಾಗೂ ಪರಂಪರೆಯ ಉನ್ನತ ಮೌಲ್ಯಗಳನ್ನು ತುಂಬುವುದು